Ullas (उल्लास)- Textbook Sahitya Vaibhav Written Summary of Poem Ullas (उल्लास)-1st PUC Hindi-Subhadra Kumari Chouhan-Class Series

Ullas( उल्लास) Poem Summary in Kannada-1st PUC Hindi Poem Summary In Kannada-1st PUC Hindi




ULLAS POEM SUMMARY IN KANNADA

ಸಾರಾಂಶ:

ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಜೀವನದ ಬಗ್ಗೆ ಆಶಾವಾದ ದೃಷ್ಟಿಕೋನವನ್ನು
ಇಟ್ಟುಕೊಂಡಿದ್ದಾರೆ. ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನದ ಸಂದೇಶವನ್ನು
ಈ ಕವಿತೆಯ ಮೂಲಕ ಕೊಡಬಯಸಿದ್ದಾರೆ.

ಕವಯಿತ್ರಿ ಮುಂದುವರೆಯುತ್ತಾ - ಬಾಲ್ಯಕಾಲದ ಸುಂದರ ಬೆಳಗಿನಲ್ಲಿ
ಸುಂದರವಾದ ವಿಕಾಸವನ್ನು ನೋಡದೆ, ಯೌವನದ ಸುಂದರನ
ಯೌವನದ ಉಲ್ಲಾಸವನ್ನು ನೋಡಿದೆ. ಪ್ರಪಂಚದ ಈ ಝಂಝಾಟದಲ್ಲಿ ಆಸೆ,
ಉಲ್ಲಾಸ ಮತ್ತು ಪ್ರೀತಿಯ ಬೆಳಕನ್ನು ಕಂಡೆ,ಕವಯಿತ್ರಿ ಪುನಃ ಈ ರೀತಿ ಹೇಳುತ್ತಾಳೆ ಜೀವನದಲ್ಲಿ ನಿರಾಶೆಯ
ವಾತಾವರಣ ಅಥವಾ 'ಈ ಪ್ರಪಂಚ ಸುಳ್ಳು-ಮಿಥ್ಯ' ಎಂಬ ನಿರಾಶೆಯನ್ನು
ನೋಡಲಿಲ್ಲ. ಶತ್ರು ಸಂಹಾರದಲ್ಲಿ ಜಿಗುಪ್ಪೆಯಾಗಲೀ ಹೃದಯದಲ್ಲಿ
ಅಶಾಂತಿಯಾಗಲೀ ಭಯವಾಗಲೀ ಎಂದೂ ಇರಲಿಲ್ಲ.

ವಾಗಲೂ ಎಲ್ಲರನ್ನೂ ಪ್ರೀತಿಸಿದ್ದಾರೆ ಮತ್ತು ಮಧುರವಾದ
ಪ್ರೇಮವನ್ನೇ ಪಡೆದಿದ್ದಾಳೆ. 'ಪ್ರೀತಿಯನ್ನು ಕೊಟ್ಟು ನೋಡು' ಎಂಬ ತತ್ವದಂತೆ
ಪ್ರೇಮದ ವಿನಿಮಯದಲ್ಲಿ ಯಾವಾಗಲೂ ಕೋಮಲ ಹೃದಯದ ಪ್ರೀತಿಯೇ
ದೊರಕಿದೆ.

ಕೊನೆಯಲ್ಲಿ ಕವಯಿತ್ರಿ ಈ ರೀತಿ ಹೇಳುತ್ತಾರೆ - ನಾನು ಪ್ರೇಮಮಯಿ. ಆದ್ದರಿಂದ
ಇಡೀ ಜಗತ್ತಿನಲ್ಲಿ ಪ್ರೇಮದ ಸಾಗರವೇ ಕಾಣುತ್ತದೆ. ಅವಳ ಜೀವನ ನಿಷ್ಕಲ್ಮಷ
ಪ್ರೇಮದಿಂದ, ಶುದ್ದ ಪ್ರೇಮದಿಂದ ತುಂಬಿದೆ. ತನ್ನ ಜೀವನದಲ್ಲಿ ಕವಯಿತ್ರಿ
ಎಂದೂ ಅಳಲಿಲ್ಲ. ಈ ಪ್ರಪಂಚವು ಎಂದೂ ಅಳುತ್ತಿರುವಂತೆ ಕಾಣಲಿಲ್ಲ.

ಆದ್ದರಿಂದಲೇ ಮಧುರವಾದ ಪ್ರೀತಿಯ ಕಣ್ಣೀರು ಕಣ್ಣಿನಿಂದ ಉದುರುತ್ತದೆ,
ನಾವು ಯಾವ ದೃಷ್ಟಿಯಿಂದ ಪ್ರಪಂಚವನ್ನು ನೋಡುತ್ತೇವೆಯೋ ಹಾಗೆಯೇ
ಕಾಣಿಸುತ್ತದೆ.


Comments